ಅಗ್ನಿಸಾಕ್ಷಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಈಗ ನಿರೂಪಕಿ | Filmibeat Kannada

2017-12-19 2

Kannada serial 'Agnisakshi' Sannidhi aka Vaishnavi Gowda will host 'Star Suvarna's new reality show 'Bharjari Comedy'. And Kannada actress Ragini Dwivedi, Doddanna and Guru Prasad will be the judges of this show, starting from 23 Dec 2017.

ಕನ್ನಡ ಕಿರುತೆರೆಯಲ್ಲಿ ಸದ್ಯ ಪ್ರಸಾರ ಆಗುತ್ತಿರುವ ಧಾರಾವಾಹಿಗಳ ಪೈಕಿ ದೊಡ್ಡ ಜನಪ್ರಿಯತೆ ಗಳಿಸಿರುವ ಸೀರಿಯಲ್ 'ಅಗ್ನಿಸಾಕ್ಷಿ'. ಈ ಧಾರಾವಾಹಿಯಲ್ಲಿ ಹೈಲೆಟ್ ಅಂದರೆ ನಾಯಕಿ ಪಾತ್ರದ ಸನ್ನಿಧಿ ಪಾತ್ರ. ಇನ್ನು ಸನ್ನಿಧಿ ಪಾತ್ರವನ್ನು ನಿರ್ವಹಿಸಿರುವುದು ನಟಿ ವೈಷ್ಣವಿ ಗೌಡ. ಇಷ್ಟು ದಿನ ಬರಿ 'ಕಲರ್ಸ್ ಕನ್ನಡ' ಚಾನೆಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ವೈಷ್ಣವಿ ಗೌಡ ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿಯೂ ಮಿಂಚುವುದಕ್ಕೆ ಸಜ್ಜಾಗಿದ್ದಾರೆ. ಸಿನಿಮಾ ನಟಿಯರ ಮಟ್ಟಿಗೆ ಜನಪ್ರಿಯತೆ ಗಳಿಸಿದ ವೈಷ್ಣವಿ ಈಗ 'ಕಲರ್ಸ್ ಕನ್ನಡ'ದಿಂದ 'ಸ್ಟಾರ್ ಸುವರ್ಣ' ವಾಹಿನಿಗೆ ಬಂದಿದ್ದಾರೆ. ಹಾಗಂತ ಅವರು 'ಸ್ಟಾರ್ ಸುವರ್ಣ' ವಾಹಿನಿಯ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಬದಲಿಗೆ ನಿರೂಪಕಿ ಆಗಿದ್ದಾರೆ. ಹೌದು, ಇಷ್ಟು ದಿನ ನಟಿ ಆಗಿ ಟಿವಿ ತೆರೆ ಮೇಲೆ ಕಾಣಿಸಿಕೊಂಡಿದ್ದ ವೈಷ್ಣವಿ ಈಗ ಹೊಸ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ನಿರೂಪಕಿ ಆಗಿದ್ದಾರೆ.